Sunday, March 18, 2012

[ಮನದ ನಿನಾದ]: ಯಾವಾನಿಗೊತ್ತು...


ಪರಮಾತ್ಮ ಚಿತ್ರದ ಯಾವಾನಿಗೊತ್ತು ಹಾಡಿಗೆ ಸಂಸಾರದ ರಿಮಿಕ್ಸ್...

ಎಲ್ಲಾ ಸಂಸಾರ...ಬರಿ ಗೋಳೇ ಆಯ್ತಲ್ಲಾ
ಗಂಡಾನಾ, ಹೇಂಡ್ತಿನಾ, ಅಪ್ಪ-ಅಮ್ಮಾನ ಯಾವಾನಿಗೊತ್ತು...

ಏನು ಮಾಡೋದು ಸಣ್ಣ ಮಾತೊಂದು ದೊಡ್ಡದಾಯ್ತು... ದೊಡ್ಡದಾಯ್ತು
ಇಂಥಾ ಟೈಮಲ್ಲಿ ಆಫೀಸ್ಬೇಕಾ ಯಾವಾನಿಗೊತ್ತು... ಯಾವಾನಿಗೊತ್ತು...
ನೆಮ್ಮದಿಯೆಂಬ ಕೆರೆಗೆ ಒಂದು ಸಣ್ಣ ಕಲ್ಲು ಬಿದ್ದಂಗಾಯ್ತು
ಕಲ್ಲು ಯಾತಕ್ಕೆ ಅಲೆ ತರುತ್ತೋ ಯಾವಾನಿಗೊತ್ತು... ಯಾವಾನಿಗೊತ್ತು
ಮಾತು ಮುಗಿಯುತ್ತೋ... ಹಾಗೆ ಬೆಳೆಯುತ್ತೋ ಯಾವಾನಿಗೊತ್ತು... ಯಾವಾನಿಗೊತ್ತು

ಅದು ಯಾವುದೋ ಒಂದು ಮಾತಿಗೆ ನಾನು... ಹೇಂಡ್ತೀನಾ ಕೆಣಕಿದೆ ಮಧ್ಯಾಹ್ನ
ಕಾಲ್ಕಿತ್ತು ನೆಮ್ಮದಿ ಆಗ್ಲೇನಾ... ಬರ ಸಿಡಿಲು ಬಡಿದಿತ್ತು ಹಂಗೆನಾ
ಕೈಹಿಡಿದ ಅರ್ಧಾಂಗಿ ತವರ ಮಾತ ಕೇಳಿ
ಮಾತಿಗಿಂತ ಮೌನ ಚೆಂದ ಅಂತ ಕೇಳಿ
ಮನಸಿನ ಮೇಲೆ ನೋವನ್ನು ಎಳೆದು
ವಿರಹ ವೇದನೆ ಅಪ್ಪಿದಂಗಾಯ್ತು
ಇಂಥಾ ಟೈಮಲ್ಲಿ ಮೀಟಿಂಗ್ ಬೇಕಿತ್ತಾ...ಯಾವಾನಿಗೊತ್ತು...ಯಾವಾನಿಗೊತ್ತು
ಎಲ್ಲಾ ಸಂಸಾರ ಹೀಗೆ ಇರುತ್ತಾ ಯಾವಾನಿಗೊತ್ತು... ಯಾವಾನಿಗೊತ್ತು

ಕನಸಲ್ಲಿ ಯಾಕೋ ನಾನು ಕುಣಿಯಲ್ಲ
ನೆಮ್ಮದೀನ ಮುದ್ದು ಮಾಡೋಕ್ ಆಗಲ್ಲ
ತಡವಾಗಿ ಮನೆಗೆ ಬರೋಕಾಗಲ್ಲಾ
ನಿಮಗೆ ಗೊತ್ತಲ್ಲಾ ಸಂಸಾರ ಆಶಯ
ಆಗ್ಲೆ ಒಂದು ಬಂತು ಹೇಂಡ್ತಿಯಿಂದ ಫೋನು
ತುಂಬಾ ಒಳ್ಳೆ ರೀತಿ ಮಾತಾಡಿ ಬಿಟ್ಳು ಕಣ್ರೀ
ಹೀಗೆ ನಾನು ಇರ್ಬೇಕು ಅಂದ್ರೆ
ಕುತ್ಗೀಗೆ ಒಂದು ನಕ್ಲೇಸೆ ಬೇಕು
ಅವಳ ಆಸೆಗೂ ಕೊನೆಯು ಇರಬಹುದಾ ಯಾವಾನಿಗೊತ್ತು... ಯಾವಾನಿಗೊತ್ತು
ಮುಂದೆ ಎಂದಾದ್ರು ಹಾಗೆ ನೆಮ್ಮದಿ ಸಿಗಬಹುದಾ ಯಾವಾನಿಗೊತ್ತು... ಯಾವಾನಿಗೊತ್ತು

~ಅಮರ್

ವಕ್ರತುಂಡೋಕ್ತಿಗಳು...


ಮದುವೆ ನಂತರದ ಸಮಸ್ಯೆಗಳು ಶೀತವಿದ್ದ ಹಾಗೆ, ಪ್ರಯತ್ನಪೂರ್ವಕವಾಗಿ ಮೂಗು ಶುಚಿಗೊಳಿಸಲು ಹೋದರೆ, ಕಣ್ಣಲ್ಲಿ ನೀರು ಬರುತ್ತೆ. ಅದು ತನ್ನಷ್ಟಕ್ಕೆ ತಾನು ಹೋಗುವವರೆಗೆ ಸುಮ್ಮನೆ ಕಾಯ ಬೇಕಷ್ಟೆ!
**********************************************************************************************************************************
ಜವಾಬ್ದಾರಿಯಿಲ್ಲದ ಯಾರಿಗೂ ಜವಾಬು ಹೇಳದ, ಕೇಳ ಬಯಸದ, ಜಡ್ಡು ಬಾರದ, ಜಿಡ್ಡು ಮಾಡದ, ಜನಕನೆದೆ ಝಲ್ಲೆನ್ನಿಸುವ, ಜಯಕ್ಕಾಗಿರುವ ಜಬರ್ ದಸ್ತ್ ಜೀವನ – ಯೌವ್ವನ!
**********************************************************************************************************************************