ಬೇಡದಿರುವ ಏನೇನೋ ನೀಡುವ ದೇವರೆ
ನನ್ನಯ ಬೇಡಿಕೆ ಸಲ್ಲಿಸಲೇನು...?
ಹೃದಯದ ತಳಮಳಕೆ
ಕಾರಣವಾಗಿರುವ...
ಮನಸಿನ ಆಸೆ ಕೇಳುವೆಯೇನು?
ನಾನೂ ಈಗ ಮದುವೆಯಾಗಬೇಕು
ನನಗೂ ಒಬ್ಳು ಹೆಂಡತಿಬೇಕು... ||ಪಲ್ಲವಿ||
ಇದ್ದಲ್ಲಿ ಇದ್ದ ಹಾಗೆ ಕಡಿಮೇನೆಯಾಗದಂತೆ
ಬ್ಯಾಂಕ್ ಬ್ಯಾಲೆನ್ಸ್ ಉಳಿಯಬೇಕು
ನಾನು ಈಗ ಮದುವೆಯಾಗಬೇಕು
ನನಗೂ ಒಬ್ಳು ಹೆಂಡತಿಬೇಕು... ||೧||
ಶಾಪಿಂಗ್ ಮಾಲಲ್ಲಿ ಹೋದಾಗಲೆಲ್ಲಾ ಹಾಗೇನೆ ವಾಪಾಸ್ ಬರಬೇಕು
ಅನ್ಯರ ಎದುರಿಗೆ ನಿಂತಾಗಲೆಲ್ಲಾ ಸುಮ್ಮನಿರಬೇಕು
ನಕ್ಕು ನಕ್ಕು ನನ್ನ ದಿನವೂ ನಗಿಸಬೇಕು
ಮನೆಯ ದೀಪ ಬೆಳಗುವಂಥ ಮನಸಿರ್ಬೇಕು
ಮುನಿಸು ಬಂದಾಗಲೆಲ್ಲಾ ಪಾತ್ರೆ ಕುಕ್ಕದಂತಿರಬೇಕು
ಸಂಬಳಾನ ಒಂದೇ ದಿನದಲ್ಲಿ ಮುಗಿಸದಂತಿರಬೇಕು
ಎಲ್ಲಾರು ರೇಷ್ಮೆ ಸೀರೆ ಬೇಕೆಂದು ಅನ್ನುವಾಗ
ಅವಳು ಬೇಡ ಅನ್ನಬೇಕು;
ಅಡಿಗೆ ಮಾಡುವಂತ ಹೆಂಡತಿಬೇಕು
ಎಂದು ನಂಗೆ ಮೂರು ಹೊತ್ತು ಅಡಿಗೆ ಮಾಡಬೇಕು;
ನಾನು ಈಗ ಮದುವೆಯಾಗಬೇಕು
ನನಗೂ ಒಬ್ಳು ಹೆಂಡತಿಬೇಕು... ||೨||
ಬಂದ ಹಾಗೆ ಸಂಬಳ ಕೊಡು ಅನ್ನದಿರಬೇಕು
ಯಾಕೋ ತಡವಾಗಿ ಬಂದಾಗ ಸುಮ್ಮನಿರಬೇಕು
ರಾಗಿಮುದ್ದೆ ಮಾಡಿ ತಿನ್ನಿಸ ಬರಬೇಕು
ಎಲ್ಲೋ ಮರೆತ ಫೈಲನ್ನು ಹೆಕ್ಕಿ ತರಬೇಕು
ಮಾನಿಟರ್ ಮೊಗದಲ್ಲಿ ಅವಳೆ ಕಂಡಂತೆ
ಮೌಸ್ ನಲ್ಲಿ ಅವಳ ಕೆನ್ನೆ ಸೋಕಿದಂತೆ
ಗುಟ್ಟಾಗಿ ತಿಳಿಯದಂತೆ ಆಫೀಸ್ಗೆ ಊಟ ತರುವಂತಿರಬೇಕು,
ಕುಬೇರನ ಮಗಳಾಗಿರಬೇಕು
ಹೇಳದೇನೆ ಅಕೌಂಟಿಗೆ ದುಡ್ಡನ್ನು ಹಾಕುವಂತಿರಬೇಕು; ||೩||
||ಪಲ್ಲವಿ||
ಇದು ದಿನಾಂಕ: ೨೪-ಸೆಪ್ಟಂಬರ್-೨೦೦೮ ಕನ್ನಡ ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟಿತವಾಗಿದೆ.
Monday, September 29, 2008
Thursday, September 25, 2008
ಗೆಳತಿಯೊಬ್ಬಳು ಜೊತೆಗಿದ್ದರೆ...
ಗೆಳತಿಯೊಬ್ಬಳು ಜೊತೆಗಿದ್ದರೆ ಸಾಲದೆ ಕೋಟಿ ರೂಪಾಯಿ
ಗೆಳತಿಯೊಬ್ಬಳು ಜೊತೆಗಿದ್ದರೆ ನಾನು ATM ಬಡಪಾಯಿ
ಗೆಳತಿಯೊಬ್ಬಳು ಜೊತೆಗಿದ್ದರೆ ಹುಣ್ಣಿಮೆ ಹೋಳಿಗೆ ದೀಪ
ಗೆಳತಿ ಶಾಪಿಂಗ್ ಹೊರಡುವೆನೆಂದರೆ ನನಗಿಲ್ಲದ ಕೋಪ
ಗಾಡಿ ಹತ್ತಿದವಳು ಸೊಂಟ ಬಿಡದವಳು ಮಾಡಿದ ಮೇಕಪ್ ಚೆಂದ
ನಾಗರ ಕುಚ್ಚಿನ ನಿಡುಜಡೆ ಮರೆತವಳು ಈಕೆ ಬಂದುದು ಬ್ಯೂಟಿಪಾರ್ಲರ್-ನಿಂದ
ನನ್ನವಳಾಸೆಗೆ ದಾರಿಗಳಿದ್ದರೆ ಕನಸೇ ಇರಬೇಕು
ಅಲ್ಲಿಯ ಹುಂಬತನ ಕಾಣುವಂತಿದ್ದರೆ ನನದೇ ಇರಬೇಕು
IT ಬೆಳಕಿನ ತುಂಬಿದ ನಗರದಲಿ ಸುಂದರಿ ಮೆರೆದಾಳು
ನನ್ನೊಡನವಳು ಗಾಡಿಯಲಿ ಮೆಲ್ಲನೆ ನಕ್ಕಾಳು
ಮೇಕಪಿಲ್ಲದೆ ಮನೆಯಿಂದ ಹೊರಗೆ ಬಂದವರೀಗೆಲ್ಲಿ?
ಕಾಂಚಣ ಬಯಸದ ಬಾಗಿಲಿನಿಂದ ಬಂದವರೀಗೆಲ್ಲಿ?
ಗೆಳತಿಯೊಂದಿಗೆ ಸಿರಿತನ ದೊರೆತನ ಹೊರತು ಬೆಲೆಯಿಲ್ಲ
ಕಾಂಚಣವೊಲುಮೆಯ ಭಾಗ್ಯವಹೊಂದದ ಗಂಡಿಗೆ ಜಯವಿಲ್ಲ
----ಅಮರ್
ಗೆಳತಿಯೊಬ್ಬಳು ಜೊತೆಗಿದ್ದರೆ ನಾನು ATM ಬಡಪಾಯಿ
ಗೆಳತಿಯೊಬ್ಬಳು ಜೊತೆಗಿದ್ದರೆ ಹುಣ್ಣಿಮೆ ಹೋಳಿಗೆ ದೀಪ
ಗೆಳತಿ ಶಾಪಿಂಗ್ ಹೊರಡುವೆನೆಂದರೆ ನನಗಿಲ್ಲದ ಕೋಪ
ಗಾಡಿ ಹತ್ತಿದವಳು ಸೊಂಟ ಬಿಡದವಳು ಮಾಡಿದ ಮೇಕಪ್ ಚೆಂದ
ನಾಗರ ಕುಚ್ಚಿನ ನಿಡುಜಡೆ ಮರೆತವಳು ಈಕೆ ಬಂದುದು ಬ್ಯೂಟಿಪಾರ್ಲರ್-ನಿಂದ
ನನ್ನವಳಾಸೆಗೆ ದಾರಿಗಳಿದ್ದರೆ ಕನಸೇ ಇರಬೇಕು
ಅಲ್ಲಿಯ ಹುಂಬತನ ಕಾಣುವಂತಿದ್ದರೆ ನನದೇ ಇರಬೇಕು
IT ಬೆಳಕಿನ ತುಂಬಿದ ನಗರದಲಿ ಸುಂದರಿ ಮೆರೆದಾಳು
ನನ್ನೊಡನವಳು ಗಾಡಿಯಲಿ ಮೆಲ್ಲನೆ ನಕ್ಕಾಳು
ಮೇಕಪಿಲ್ಲದೆ ಮನೆಯಿಂದ ಹೊರಗೆ ಬಂದವರೀಗೆಲ್ಲಿ?
ಕಾಂಚಣ ಬಯಸದ ಬಾಗಿಲಿನಿಂದ ಬಂದವರೀಗೆಲ್ಲಿ?
ಗೆಳತಿಯೊಂದಿಗೆ ಸಿರಿತನ ದೊರೆತನ ಹೊರತು ಬೆಲೆಯಿಲ್ಲ
ಕಾಂಚಣವೊಲುಮೆಯ ಭಾಗ್ಯವಹೊಂದದ ಗಂಡಿಗೆ ಜಯವಿಲ್ಲ
----ಅಮರ್
Labels:
kannada fun,
kannada funny,
kannada remix,
remix songs,
ಗೆಳತಿ
ಆಕಿ ನನ್ನಾಕಿ...
ತಾನು ತಂಗಳು ತಿಂದು
ಬಿಸಿ ಅನ್ನ ತಿನ್ನಿಸಿದಾಕಿ,
ಆಕಿ ನನ್ನಾಕಿ;
ತನ್ನ ಬದುಕ ನಮಗಾಗಿ ಮೀಸಲಿಟ್ಟು
ಪ್ರೀತಿಯ ಧಾರೆಯೆರೆದಾಕಿ
ಆಕಿ ನನ್ನಾಕಿ;
ತನಗೆ ಚಳಿಯಾದರೆ
ನನಗೆ ಚಾದರ ಹೊದಿಸಿದಾಕಿ
ಆಕಿ ನನ್ನಾಕಿ;
ಸಕಲ ವಿಕೋಪಗಳ
ಧರೆಯ ಹಾಗೆ
ಸಹಿಸಿಕೊಂಡಾಕಿ
ಕ್ಷಮೆಯಾ ಧರಿತ್ರಿ
ಆಕಿ ನನ್ನಾಕಿ;
ಕೈಯ ಹಿಡಿದು
ಅಕ್ಷರ ತಿದ್ದಿ
ತಲೆಯಲಿ ಬುದ್ಧಿ ಮೂಡಿಸಿದಾಕಿ
ಆಕಿ ನನ್ನಾಕಿ;
ನಿಸ್ವಾರ್ಥ ಒಲುಮೆಯ
ಜಗತ್ತಿಗೇ ತೋರಿಸಿದಾಕಿ
ಆಕಿ ನನ್ನಾಕಿ
ನನ್ನ ಹಡೆದಾಕಿ;
---ಅಮರ್
ಬಿಸಿ ಅನ್ನ ತಿನ್ನಿಸಿದಾಕಿ,
ಆಕಿ ನನ್ನಾಕಿ;
ತನ್ನ ಬದುಕ ನಮಗಾಗಿ ಮೀಸಲಿಟ್ಟು
ಪ್ರೀತಿಯ ಧಾರೆಯೆರೆದಾಕಿ
ಆಕಿ ನನ್ನಾಕಿ;
ತನಗೆ ಚಳಿಯಾದರೆ
ನನಗೆ ಚಾದರ ಹೊದಿಸಿದಾಕಿ
ಆಕಿ ನನ್ನಾಕಿ;
ಸಕಲ ವಿಕೋಪಗಳ
ಧರೆಯ ಹಾಗೆ
ಸಹಿಸಿಕೊಂಡಾಕಿ
ಕ್ಷಮೆಯಾ ಧರಿತ್ರಿ
ಆಕಿ ನನ್ನಾಕಿ;
ಕೈಯ ಹಿಡಿದು
ಅಕ್ಷರ ತಿದ್ದಿ
ತಲೆಯಲಿ ಬುದ್ಧಿ ಮೂಡಿಸಿದಾಕಿ
ಆಕಿ ನನ್ನಾಕಿ;
ನಿಸ್ವಾರ್ಥ ಒಲುಮೆಯ
ಜಗತ್ತಿಗೇ ತೋರಿಸಿದಾಕಿ
ಆಕಿ ನನ್ನಾಕಿ
ನನ್ನ ಹಡೆದಾಕಿ;
---ಅಮರ್
Subscribe to:
Posts (Atom)