Monday, September 29, 2008

ನನಗೂ ಒಬ್ಳು ಹೆಂಡತಿಬೇಕು...

ಬೇಡದಿರುವ ಏನೇನೋ ನೀಡುವ ದೇವರೆ
ನನ್ನಯ ಬೇಡಿಕೆ ಸಲ್ಲಿಸಲೇನು...?
ಹೃದಯದ ತಳಮಳಕೆ
ಕಾರಣವಾಗಿರುವ...
ಮನಸಿನ ಆಸೆ ಕೇಳುವೆಯೇನು?
ನಾನೂ ಈಗ ಮದುವೆಯಾಗಬೇಕು
ನನಗೂ ಒಬ್ಳು ಹೆಂಡತಿಬೇಕು... ||ಪಲ್ಲವಿ||

ಇದ್ದಲ್ಲಿ ಇದ್ದ ಹಾಗೆ ಕಡಿಮೇನೆಯಾಗದಂತೆ
ಬ್ಯಾಂಕ್ ಬ್ಯಾಲೆನ್ಸ್ ಉಳಿಯಬೇಕು
ನಾನು ಈಗ ಮದುವೆಯಾಗಬೇಕು
ನನಗೂ ಒಬ್ಳು ಹೆಂಡತಿಬೇಕು... ||೧||

ಶಾಪಿಂಗ್ ಮಾಲಲ್ಲಿ ಹೋದಾಗಲೆಲ್ಲಾ ಹಾಗೇನೆ ವಾಪಾಸ್ ಬರಬೇಕು
ಅನ್ಯರ ಎದುರಿಗೆ ನಿಂತಾಗಲೆಲ್ಲಾ ಸುಮ್ಮನಿರಬೇಕು
ನಕ್ಕು ನಕ್ಕು ನನ್ನ ದಿನವೂ ನಗಿಸಬೇಕು
ಮನೆಯ ದೀಪ ಬೆಳಗುವಂಥ ಮನಸಿರ್ಬೇಕು
ಮುನಿಸು ಬಂದಾಗಲೆಲ್ಲಾ ಪಾತ್ರೆ ಕುಕ್ಕದಂತಿರಬೇಕು
ಸಂಬಳಾನ ಒಂದೇ ದಿನದಲ್ಲಿ ಮುಗಿಸದಂತಿರಬೇಕು
ಎಲ್ಲಾರು ರೇಷ್ಮೆ ಸೀರೆ ಬೇಕೆಂದು ಅನ್ನುವಾಗ
ಅವಳು ಬೇಡ ಅನ್ನಬೇಕು;
ಅಡಿಗೆ ಮಾಡುವಂತ ಹೆಂಡತಿಬೇಕು
ಎಂದು ನಂಗೆ ಮೂರು ಹೊತ್ತು ಅಡಿಗೆ ಮಾಡಬೇಕು;
ನಾನು ಈಗ ಮದುವೆಯಾಗಬೇಕು
ನನಗೂ ಒಬ್ಳು ಹೆಂಡತಿಬೇಕು... ||೨||

ಬಂದ ಹಾಗೆ ಸಂಬಳ ಕೊಡು ಅನ್ನದಿರಬೇಕು
ಯಾಕೋ ತಡವಾಗಿ ಬಂದಾಗ ಸುಮ್ಮನಿರಬೇಕು
ರಾಗಿಮುದ್ದೆ ಮಾಡಿ ತಿನ್ನಿಸ ಬರಬೇಕು
ಎಲ್ಲೋ ಮರೆತ ಫೈಲನ್ನು ಹೆಕ್ಕಿ ತರಬೇಕು
ಮಾನಿಟರ್ ಮೊಗದಲ್ಲಿ ಅವಳೆ ಕಂಡಂತೆ
ಮೌಸ್ ನಲ್ಲಿ ಅವಳ ಕೆನ್ನೆ ಸೋಕಿದಂತೆ
ಗುಟ್ಟಾಗಿ ತಿಳಿಯದಂತೆ ಆಫೀಸ್ಗೆ ಊಟ ತರುವಂತಿರಬೇಕು,
ಕುಬೇರನ ಮಗಳಾಗಿರಬೇಕು
ಹೇಳದೇನೆ ಅಕೌಂಟಿಗೆ ದುಡ್ಡನ್ನು ಹಾಕುವಂತಿರಬೇಕು; ||೩||
||ಪಲ್ಲವಿ||

ಇದು ದಿನಾಂಕ: ೨೪-ಸೆಪ್ಟಂಬರ್-೨೦೦೮ ಕನ್ನಡ ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟಿತವಾಗಿದೆ.

No comments: