Sunday, September 19, 2010

ಕವಿಶೈಲದಲ್ಲೊಂದು ಮುಂಜಾವು...

ರಾಷ್ಟ್ರಕವಿ ಕುವೆಂಪುರವರಿಗೆ ಸ್ಫೂರ್ತಿಯ ಸೆಲೆಯಾಗಿದ್ದ ಜಾಗ, ಕಣ್ಮನ ಸೆಳೆಯುವಂತಿತ್ತು. ಆ ಹಸಿರಲ್ಲಿ ಕುವೆಂಪುರವರ ಉಸಿರು ಬೆರೆತಿರುವಂತಿತ್ತು. ಅಲ್ಲಿಯ ಸೃಷ್ಟಿಯ ವೈಭವ ನೋಡಿ ಮನಸೂರೆಗೊಳ್ಳದೆ ಇರಲಿಲ್ಲ.

ಮಲಗಿರೋ ಕವಿಗೆ ನಮಿಸಲು
ಹೋಸ ಜೀವದಿಂದ ಬಂದ ಹಸಿರೆಲೆಗಳಿಗೆ,
ರವಿರಾಜನಿಗೆ ಅಲ್ಲಿತ್ತು ಪೈಪೋಟಿ;

ಈ ಕವಿಶೈಲದ ಸ್ವರ್ಗದಲ್ಲಿ
ಮುಗಿಲು ಮುಟ್ಟಿತ್ತು ನಮ್ಮ ಹರುಷ
ಎಲ್ಲೆಯ ದಾಟಿ;
ಕವಿ ಪಾದಕೆ ಮುತ್ತಿಟ್ಟ
ಧರೆಗೆ ನಮ್ಮ ತನುವು ಸೋಕಿ!

~ಅಮರ್

No comments: