Thursday, September 30, 2010

ಮನೆಗೋಗದೆ ಕೆಲ್ಸ ಮಾಡುತ್ತಿದ್ದೆ ಕೂತಲ್ಲಿ...

ಯೋಗರಾಜ್ ಭಟ್ ಅವರ ಕ್ಷಮೆಕೋರಿ... ಜಾಕಿ ಚಿತ್ರದ ಹಾಡು "ಶಿವ ಅಂತ ಹೋಗುತ್ತಿದ್ದೆ" - ಇದರ ಸಾಫ್ಟ್-ವೇರ್ ರಿಮಿಕ್ಸ್ ಹಾಡು.

    ಮನೆಗೋಗದೆ ಕೆಲ್ಸ ಮಾಡುತ್ತಿದ್ದೆ ಕೂತಲ್ಲಿ
    ಸಿಕ್ಕಾಪಟ್ಟೆ ಪ್ರೆಜರ್ರು ಇತ್ತು ಆಫೀಸಿನಲಿ
    ಹೆಂಡತಿ ಕರೆ ಬರ್ತಾಯಿತ್ತು ಫೋನಿನಲಿ
    ಮ್ಯಾನೇಜರ್ ಬಂದ್ರು ಸೈಡಿನಲಿ;
ಕಣ್ಣು-ಕಣ್ಣು ಬಿಟ್ಟಂಗಾಯಿತು ನೋಡುತಲಿ
ಚಾಕು ತಂದು ಚುಚ್-ದಂಗಾಯಿತು ಹಾರ್ಟಿನಲಿ
ಉಸಿರು ಹಿಡಿದು ಎಳ್ದಂಗಾಯಿತು ಮೂಗಿನಲಿ
ಮ್ಯಾನೇಜರ್ ಕುಂತಾಗ ಛೇರಿನಲಿ
ಛೇರಿನಲಿ...ಛೇರಿನಲಿ...ಛೇರಿನಲಿ;
    ಎದ್ದು ಊಟಕ್ಕೆ ಹೋಗಂಗಿಲ್ಲ
    ಮನೆಗೆ ಫೋನ್ ಮಾಡಂಗಿಲ್ಲ
    ಎದ್ದು ಊಟಕ್ಕೆ ಹೋಗಂಗಿಲ್ಲ...ಮನೆಗೆ ಫೋನ್ ಮಾಡಂಗಿಲ್ಲ
    ಅಯ್ಯೋ ನಂಗೆ ಯಾಕೆ ಇಷ್ಟು ಹಸಿವು
    ಎಷ್ಟು ತಿಂದ್ರು ಯಾಕೆ ಹೀಗೆ ಕಾಡುವುದು;
ನನ್ನ ಮಾತು ಕೇಳಲಿಲ್ಲ
ಚೂರು ಸಹನೆ ತೋರಲಿಲ್ಲ... ಹಸಿವು ಕಣ್ಣಿಗೆ ಕಾಣಲಿಲ್ಲ
ನನ್ನ ಮಾತು ಮೀರಿ ನಡೆದುಕೊಂಡು
ತಡಮಾಡದೆ ಕೆಲ್ಸ ಕೊಟ್ಟು ಬಿಟ್ರು
ಹೊಟ್ಟೆಪಾಡಿಗಾಗಿ ಕೆಲ್ಸ ನಂದು
ಹೊಟ್ಟೆಪಾಡಿಗಾಗಿ ಕೆಲ್ಸ ನಂದು
ಹೊಟ್ಟೆಯೇ ಕಾಣಂಗಿಲ್ಲ ಮ್ಯಾನೇಜರ್ರಿಗೆ ಎಂದೂ
ಐಟಿ ಗುರು...ಇದು ಐಟಿ ಗುರು....ಐಟಿ ಗುರು....ಇದು ಐಟಿ ಗುರು....;
    ಮನೆಗೋಗದೆ ಕೆಲ್ಸ ಮಾಡುತ್ತಿದ್ದೆ ಕೂತಲ್ಲಿ
    ಸಿಕ್ಕಾಪಟ್ಟೆ ಪ್ರೆಜರ್ರು ಇತ್ತು ಆಫೀಸಿನಲಿ
    ಹೆಂಡತಿ ಕರೆ ಬರ್ತಾಯಿತ್ತು ಫೋನಿನಲಿ
    ಮ್ಯಾನೇಜರ್ ಬಂದ್ರು ಸೈಡಿನಲಿ;
ಉಣ್ಣಲಿಲ್ಲ...ತಿನ್ನಲಿಲ್ಲ... ರಾತ್ರೋ-ರಾತ್ರಿ...ಕೆಲಸವೇ
ಉಣ್ಣಲಿಲ್ಲ...ತಿನ್ನಲಿಲ್ಲ... ರಾತ್ರೋ-ರಾತ್ರಿ...ಕೆಲಸ
ಕುಂತು ಬಿಟ್ರು ಪಕ್ಕದ ಛೇರಿನಲಿ
ಹೊಟ್ಟೆ ತುಂಬಿಸ್ಕೋ ಬೇಕು ನೀರು ಕುಡಿಯುತಲಿ;
    ನನ್ನ ಹೇಂಡ್ತಿ... ಒಬ್ಳೇ ಮನೇಲಿ
    ನನ್ನ ಹೇಂಡ್ತಿ... ಒಬ್ಳೇ ಮನೇಲಿ ಕಾದು ಕಾದು ಮಲ್ಗೇ ಬಿಟ್ಳು
    ಈಜಿಯಾಗಿ ಹೇಗೆ ನಾನು ಸಂತೈಸಲಿ ಅದರಲ್ಲು ಮಧ್ಯರಾತ್ರಿ ಹೋಗುತಲಿ
    ಬೇಗ ಮನೆಗೆ ಬರ್ಲೆ ಬೇಕು ಊಟ ಸಿಗಲು
    ಬೇಗ ಮನೆಗೆ ಬರ್ಲೆ ಬೇಕು ಊಟ ಸಿಗಲು
    ಇಂಥಾ ಕೆಲ್ಸ ಬೇಕಾ ಗುರು
    ಬೇಕು ಗುರು...ಬೇಕು ಗುರು...ಬೇಕು ಗುರು...ಬೇಕು ಗುರು...;
ಮನೆಗೋಗದೆ ಕೆಲ್ಸ ಮಾಡುತ್ತಿದ್ದೆ ಕೂತಲ್ಲಿ
ಸಿಕ್ಕಾಪಟ್ಟೆ ಪ್ರೆಜರ್ರು ಇತ್ತು ಆಫೀಸಿನಲಿ
ಹೆಂಡತಿ ಕರೆ ಬರ್ತಾಯಿತ್ತು ಫೋನಿನಲಿ
ಮ್ಯಾನೇಜರ್ ಬಂದ್ರು ಸೈಡಿನಲಿ;

~ ಅಮರ್

No comments: